ಬಾನಿಗೇ ಸಿಡಿಲಬ್ಬರಿಸಿದನು
ಶತ: ಸಹೋದರರನು ಮೄತ್ಯು ನುಂಗಿತು
ಮುಕುಂದನ ಕಪಟವು ಮಿತ್ರನ ಕೊಂದಿತು
ಕಲಿಸಿದ ದ್ರೋಣ ಕೄಪರು ಕಣ್ಮುಚ್ಚಿದರು
ಭೀಶ್ಮನು ಬಾಸುಂಡೆಗಳೊಡನೆ ವಿಲಿನನಾದನು
ಸುಯೋಧನನು ದುರ್ಯೋಧನನಾದನು |
ವೈಷಂಪಾಯನವೆಂಬೀ ಶಾಂತ ಸರೋವರದೊಳ್
ಕೆಂಡದ ಕೆತ್ತನೆಯು ಪದ್ಮಾಸನದ ರೂಪತಾಳಿತು |
ಕಾಳಿಂಗಮರ್ದನನ ಮುಂದೆ
ಕಾಳಿಂಗ ಪತಾಕೆಯು ವಿಷ ಸೂಸುತಿತ್ತು |
ಮತ್ಸ್ಯಮಕರಮಾರ್ಜಾಲಗಳು
ಕುದಿಯುತಿಹ ಸರೋವರದೊಳ್ ಪಾಕವಾಗುತಿತ್ತು |
ಮಹಾಕಾಳಗದ ಕಠಿಣ ಗಾಯಗಳು
ನೀರೊಳಗೂ ಹೊಗೆ ಬೀರುತಿತ್ತು |
ದ್ರೌಪದಿಯ ಸೀರೆಯೊಳ್ ನೂರು ಸೋದರರ
ಸಾವು ಅಡಗಿತ್ತೇ |
ಐವರಜ್ನ್ಯಾತವಾಸವು ಐವತ್ತು ಸಹಸ್ರ
ಸೇನೆಯ ಮಣ್ಣುಮುಕ್ಕಿಸಿತೇ |
ಸೋದರರ ರಕ್ತ ಹಿಂಡಿದ ಅದೇ ಭೀಮನು
ಅವರೊಡನೆ ಆಡಿದ ಬಾಲ್ಯವನು ಮರೆತನೇ |
ಸೂತಪುತ್ರನನು ಸುಯೋಧನಮಿತ್ರನಾಗಿ
ಮಾಡಿದ ಪರಿಯನು ಮುಕುಂದನು ಮರೆತನೇ |
ದಾಯಾದಿತನವು ಒಲವಿನವರ
ಓರಗೆಯವರ ಬಲಿಪಡೆಯಿತು |
ನೂರೈವರ ಹಗೆತನವು
ಸಹಸ್ರರನು ಕೂಪದೊಳ್ ನೂಕಿತು |
ಧರ್ಮಯುದ್ಧವೆಂಬ ಹೆಸರ ಹೊತ್ತು
ಧರ್ಮೀಯರೆ ಅಸುನೀಗಿದರು |
ಇವಿತ್ಯಾದಿ ಆಲೋಚನೆಗಳನು ಹೊತ್ತ
ಸುಯೋಧನನ ಕಂಚಿನ ಹೃದಯ ಕೆಂಡವಾಯಿತು |
ಕ್ರೋಧವು ಹಲ್ಲುಗಳ ಮಧ್ಯೆ ಕಟಕಟಿಸಿತು
ಹೊರನಿಂತ ಭೀಮನ ಚೀತ್ಕಾರಗಳು ಹಿಯಾಳಿಕೆಗಳು
ಕಾದ ಸರೋವರವನು ಇನ್ನೂ ಕುದಿಸಿತು
ಒಳಗಿದ್ದ ಅಸ್ಸ್ಥಿರವಾದ ಆತ್ಮಕೆ ಆವೇಶವು ಹುಟ್ಟಿತು |
ಬಲರಾಮನಿಗಾಗಿ ಕಾಯುತಿದ್ದ ಕಳಿಂಗಪತಾಕನು
ತಾಳಲಾರದೆ ಸರೋವರದೊಳಿಂದ ಹೆಡೆಯೆತ್ತಿದನ್ |
ಮರಣಭಯವನು ಬಿಸುಡಿ
ಮರಣಸಿಂಹಾಸನವನು ಸಮೀಪಿಸಿದನು |
ಭೀಮನೇ ಶತ್ರುವೆಂದನು,
ಕ್ರೋಧವೇ ಅಖಾಡವೆಂದನು,
ಹಸ್ತವೇ ಆಯುಧವೆಂದನು...
ಬಾನಿಗೇ ಸಿಡಿಲಬ್ಬರಿಸಿದನು ||
-Aಭಿ
(ಸೂ: ಗಧಾಯುದ್ಧ ಪ್ರಸಂಗ, ಮಹಾಭಾರತ)
ಶತ: ಸಹೋದರರನು ಮೄತ್ಯು ನುಂಗಿತು
ಮುಕುಂದನ ಕಪಟವು ಮಿತ್ರನ ಕೊಂದಿತು
ಕಲಿಸಿದ ದ್ರೋಣ ಕೄಪರು ಕಣ್ಮುಚ್ಚಿದರು
ಭೀಶ್ಮನು ಬಾಸುಂಡೆಗಳೊಡನೆ ವಿಲಿನನಾದನು
ಸುಯೋಧನನು ದುರ್ಯೋಧನನಾದನು |
ವೈಷಂಪಾಯನವೆಂಬೀ ಶಾಂತ ಸರೋವರದೊಳ್
ಕೆಂಡದ ಕೆತ್ತನೆಯು ಪದ್ಮಾಸನದ ರೂಪತಾಳಿತು |
ಕಾಳಿಂಗಮರ್ದನನ ಮುಂದೆ
ಕಾಳಿಂಗ ಪತಾಕೆಯು ವಿಷ ಸೂಸುತಿತ್ತು |
ಮತ್ಸ್ಯಮಕರಮಾರ್ಜಾಲಗಳು
ಕುದಿಯುತಿಹ ಸರೋವರದೊಳ್ ಪಾಕವಾಗುತಿತ್ತು |
ಮಹಾಕಾಳಗದ ಕಠಿಣ ಗಾಯಗಳು
ನೀರೊಳಗೂ ಹೊಗೆ ಬೀರುತಿತ್ತು |
ದ್ರೌಪದಿಯ ಸೀರೆಯೊಳ್ ನೂರು ಸೋದರರ
ಸಾವು ಅಡಗಿತ್ತೇ |
ಐವರಜ್ನ್ಯಾತವಾಸವು ಐವತ್ತು ಸಹಸ್ರ
ಸೇನೆಯ ಮಣ್ಣುಮುಕ್ಕಿಸಿತೇ |
ಸೋದರರ ರಕ್ತ ಹಿಂಡಿದ ಅದೇ ಭೀಮನು
ಅವರೊಡನೆ ಆಡಿದ ಬಾಲ್ಯವನು ಮರೆತನೇ |
ಸೂತಪುತ್ರನನು ಸುಯೋಧನಮಿತ್ರನಾಗಿ
ಮಾಡಿದ ಪರಿಯನು ಮುಕುಂದನು ಮರೆತನೇ |
ದಾಯಾದಿತನವು ಒಲವಿನವರ
ಓರಗೆಯವರ ಬಲಿಪಡೆಯಿತು |
ನೂರೈವರ ಹಗೆತನವು
ಸಹಸ್ರರನು ಕೂಪದೊಳ್ ನೂಕಿತು |
ಧರ್ಮಯುದ್ಧವೆಂಬ ಹೆಸರ ಹೊತ್ತು
ಧರ್ಮೀಯರೆ ಅಸುನೀಗಿದರು |
ಇವಿತ್ಯಾದಿ ಆಲೋಚನೆಗಳನು ಹೊತ್ತ
ಸುಯೋಧನನ ಕಂಚಿನ ಹೃದಯ ಕೆಂಡವಾಯಿತು |
ಕ್ರೋಧವು ಹಲ್ಲುಗಳ ಮಧ್ಯೆ ಕಟಕಟಿಸಿತು
ಹೊರನಿಂತ ಭೀಮನ ಚೀತ್ಕಾರಗಳು ಹಿಯಾಳಿಕೆಗಳು
ಕಾದ ಸರೋವರವನು ಇನ್ನೂ ಕುದಿಸಿತು
ಒಳಗಿದ್ದ ಅಸ್ಸ್ಥಿರವಾದ ಆತ್ಮಕೆ ಆವೇಶವು ಹುಟ್ಟಿತು |
ಬಲರಾಮನಿಗಾಗಿ ಕಾಯುತಿದ್ದ ಕಳಿಂಗಪತಾಕನು
ತಾಳಲಾರದೆ ಸರೋವರದೊಳಿಂದ ಹೆಡೆಯೆತ್ತಿದನ್ |
ಮರಣಭಯವನು ಬಿಸುಡಿ
ಮರಣಸಿಂಹಾಸನವನು ಸಮೀಪಿಸಿದನು |
ಭೀಮನೇ ಶತ್ರುವೆಂದನು,
ಕ್ರೋಧವೇ ಅಖಾಡವೆಂದನು,
ಹಸ್ತವೇ ಆಯುಧವೆಂದನು...
ಬಾನಿಗೇ ಸಿಡಿಲಬ್ಬರಿಸಿದನು ||
-Aಭಿ
(ಸೂ: ಗಧಾಯುದ್ಧ ಪ್ರಸಂಗ, ಮಹಾಭಾರತ)
abhabha!!hmmm prasangalu koodi kavana!!
ReplyDeleteidu yellinda bantu ??
I always like to comment on the Gadhaayuddha prasanga, inspired from the great poet Ranna
ReplyDelete