Sunday, March 31, 2013

Hanigavana

ಪ್ರೀತಿ


ಕೆಂದಾವರೆಯ ತೋಟದಲಿ
ಕಾಡಿನೆಲೆಗಳ ನಡುವಿನಲಿ
ನೆರೆದ ನಿಶ್ಯಬ್ಧದಲಿ
ನೀ ಬರೆದೆ ನನ್ನ ಪ್ರೇಮಗೀತೆಯಾ..

ಹುಣ್ಣಿಮೆಯ ಬೆಳಕಿನಡಿಯಲಿ
ಮಳೆಹನಿ ತಂದ ಗಾಳಿಯಲಿ
ಗಾಳಿ ಹೊತ್ತ ಮಣ್ಣಿನ ಪರಿಮಳದಲಿ
ನೀ ನನ್ನೊದಿಗೆ ಇಟ್ಟೆ ಹೆಜ್ಜೆಯಾ...

ಇದು ಸಾಕು ನನಗಿದು ಸಾಕು...
ನೀನಲ್ಲದೇ ಬೇರೇನು ಬೇಕು..?


ಆಗಸದಲಿ ಚುಕ್ಕಿಗಳನ್ನಿಟ್ಟೆ..
ಮೋಡವ ಸರಿಸಿ ಚಂದ್ರನ ತೋರಿಸಿದೆ..
ಮೇಣದ ಬೆಳಕು ನಿನ್ನೆದುರೇ ಸುಂದರ..
ನೀನಿದ್ದರೆ ದುಂಬಿಯ ಹಾಡೂ ಸುಮಧುರ

ನಿನ್ನೆದುರು ಮುಂಜಾವಿನ ಮಂಜು ಸುಂದರ
ನನ್ನ ಮೀಸೆಯಲಿ ಮಿನುಗಿತು ಆ ಹನಿಗಳ ಚಿತ್ತಾರ
ಅದ ಚಿಮುಕಿಸಿ ಆಡಿದೆ ನೀರಿನಾಟ..
ನನ್ನೆದೆಯಲಿ ಬಡಿದಾಡಿತು ನಿನ್ನ ಪ್ರೇಮದಾಟ

ಇದು ಸಾಕು ನನಗಿದು ಸಾಕು...
ನೀನಲ್ಲದೇ ಬೇರೇನು ಬೇಕು..?



                                                     - ಅಭಿ

5 comments:

  1. ahhmm yermbe indu?? anyway very nice...

    ReplyDelete
  2. Chennagide..hudugi hesaru helidre inna chennagi iratte :)

    ReplyDelete
    Replies
    1. Dhanyavaadagalu... illi baruva ella sandarbhagalu kevala...kaalpanika

      Delete
  3. he he.. abhaaaaaaaaa!! yaaro heegella kaldhogidaare :D.. nice

    ReplyDelete

Trek Earth - Destinations