Sunday, July 29, 2012

ಕವನ

ನೀರವ...

ಗಡಿಯಾರವು ತಲೆಕೆಳಗಾಗಿ ಓಡಿದಾಗ,
ಕಾಲ್ಗೆಜ್ಜೆಯು ಸದ್ದಿಲ್ಲದೇ ಚಲಿಸಿದಾಗ,
ಕಾರ್ಮೊಡವು ಹನಿಗಳಿಲ್ಲದೆ ಆವರಿಸಿದಾಗ,
ಭಯತ೦ದ ಭೂತವೆ ಈ ನೀರವವು

ಅಂಬರದಲ್ಲಿ ಸೂರ್ಯನು ಕಾಂತಿಗುಂದಿದಾಗ,
ಪಾರಿಜಾತವೂ ಕಂಪಿಲ್ಲದೇ ಅರಳಿತು,
ಮರದಲೆಗಳ ಸೆರೆಯಲ್ಲಿ ಗಾಳಿಯು ಹೂಂಗುಡುವಾಗ,
ಕ೦ಠೀರವ ಕೋಗಿಲೆಯ ಮೌನಿಯಾಗಿತ್ತು

ಸಾಗರದಲೆಗಳು ಬಂಡೆಗಪ್ಪಳಿಸಿದಾಗ
ನೀರವತೆಯ ನುಂಗುತ್ತಾ ಬಂಡೆಯನ್ನು ಕರಗಿಸಿದವು,
ಮನದಾಳದ ಕಲ್ಮಶಗಳು ಧ್ವನಿಯಿಲ್ಲದೇ
ಮನುಷ್ಯನ ಕರಗಿಸಿದವು,
ಎದೆಗೂಡಿನಲ್ಲಿ ಹೃದಯವು
ಭಾವವಿಲ್ಲದೆ ಬಡಿಯಿತು..

ಒಲವಿಲ್ಲದ ಭೂಮಿಯೊಳ್ ಆಳುವುದೇ ನೀರವವೂ
ಉತ್ತರವಿಲ್ಲದ ಗೊಂದಲವೆ ಈ ಮೌನವೂ
ಸಾಮ್ರಾಜ್ಯಗಳು ಅಳಿದುಳಿದವು, ಅಸ್ತ್ರಗಳಿಂದಲ್ಲ
...
ಕೆಡುಕರ ಆರ್ಭಟದೊಳಗೆ ಸತ್ತ,
ಸಜ್ಜನರಾ ನೀರವ ಮೌನದಿಂದ.....!!



-ಅಭಿ

Trek Earth - Destinations